ಬಹುಭಾಷಾ ಪಠ್ಯ ಪ್ರದರ್ಶನ ಸೂಟ್

ಭಾರತವು 893,862,000 ಸೆಲ್ ಫೋನ್‌ಗಳಿಗೆ ನೆಲೆಯಾಗಿದೆ, ಫೋನ್ ತಯಾರಕರು ಮತ್ತು ಗೇಮ್ ಡೆವೆಲಪರ್‌ಗಳು ಒಂದುವೇಳೆ ಅವರು ವೈವಿಧ್ಯಮಯ ಭಾರತೀಯ ಮಾರುಕಟ್ಟೆಯನ್ನು ತಲುಪುವುದಾದರೆ ತಮ್ಮ ವ್ಯಾಪ್ತಿಯನ್ನು ಘಾತೀಯವಾಗಿ ಅಳೆಯುವ ಅವಕಾಶವನ್ನು ಒದಗಿಸುತ್ತಿದ್ದಾರೆ -ಸೆಲ್ ಫೋನ್‌ಗಳನ್ನು ಹೆಚ್ಚು ಸ್ಥಳೀಯ ಭಾಷಾ ಸ್ನೇಹಿಯನ್ನಾಗಿ ಮಾಡಲು ಎರಡು ವಿಶಿಷ್ಟ ಪರಿಹಾರಗಳನ್ನು ಒಳಗೊಂಡಿರುವ ಸದೃಢವಾದ ಫಾಂಟ್ ಸೂಟ್‌ನೊಂದಿಗೆ ರೆವೆರಿ ಇದನ್ನು ಸಾಧ್ಯವಾಗಿಸುತ್ತದೆ.

ನಿಮ್ಮ ಆಯ್ಕೆಯ ಭಾಷೆಯಲ್ಲಿ ಅಭಿವ್ಯಕ್ತಿ ಪಡಿಸುವ ಸಮಾದಾನವನ್ನು ಆನಂದಿಸಿ.

ಯುನಿಟಿ ಫಾಂಟ್ ಸಾಫ್ಟ್‌ವೇರ್ ಡೆವಲಪ್ಮೆಂಟ್ ಕಿಟ್ (ಎಸ್‌.ಡಿ.ಕೆ)

ಯುನಿಟಿಯಂತಹ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸ್ಕ್ರೀನ್ ಮೇಲೆ ವೇಗವಾಗಿ ಪ್ರದರ್ಶನಗೊಳ್ಳುವ ಅಗತ್ಯವಿದೆ. ಭಾರತೀಯ ಭಾಷೆಗಳಂತಹ ಸಂಕೀರ್ಣ ಬರಹಗಳ ಫಾಂಟ್‌ಗಳು ‌ಮುಕ್ತ ಪ್ರಕಾರದ ಫಾಂಟ್ ವಿಶೇಷಣಗಳನ್ನು ಬಳಸುತ್ತವೆ, ಇದಕ್ಕೆ ಭಾರೀ ಕಾರ್ಯಾಚರಣೆಗಳ ಅಗತ್ಯವಿರುವುದರಿಂದ ಪ್ರಸ್ತುತ ಪಡಿಸುವ ವೇಗದಲ್ಲಿ ರಾಜಿಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮುಕ್ತ ಪ್ರಕಾರದ ವಿಶೇಷಣಗಳನ್ನು ಬೆಂಬಲಿಸುವುದಿಲ್ಲ. ರೆವೆರಿಯ ಯುನಿಟಿ ಫಾಂಟ್ ಎಸ್.‌ಡಿ.ಕೆ ಒಂದು ಡಿಸ್ಪ್ಲೇ ಎಸ್‌.ಡಿ.ಕೆ ಆಗಿದ್ದು, ಇದು ಯುನಿಟಿ ಗೇಮ್ ಡೆವೆಲಪರ್‌ಗಳಿಗೆ ಸಂಕೀರ್ಣ ಭಾರತೀಯ ಭಾಷೆಗಳನ್ನು ನಿರೂಪಿಸಲು ಅನುವು ಮಾಡಿಕೊಡುತ್ತದೆ. ಇದು ಸ್ವಾಮ್ಯದ ಸ್ಕೇಲೆಬಲ್ ಟ್ರೂಟೈಪ್ ಫಾಂಟ್‌ಗಳನ್ನು ಬಳಸುತ್ತದೆ.

ವೈಜ್ಞಾನಿಕವಾಗಿ - ನಿಖರವಾದ ಫಾಂಟ್‌ಗಳು

ರೆವೆರಿ ಯುನಿಟಿ ಫಾಂಟ್ ಎಸ್‌.ಡಿ.ಕೆ ಸಂಯೋಜನೆಯ ಎಂಜಿನ್‌ನೊಂದಿಗೆ ಸ್ವಾಮ್ಯದ ಟ್ರೂಟೈಪ್ ಫಾಂಟ್‌ಗಳನ್ನು ಬಳಸುತ್ತದೆ, ಇದು ಸಂಕೀರ್ಣ ಭಾರತೀಯ ಬರಹಾಕ್ಷರಗಳ ಸರಿಯಾದ ಮರುಕ್ರಮ ಮತ್ತು ಸಂಯೋಜನೆಯನ್ನು ಖಾತ್ರಿಗೊಳಿಸುತ್ತದೆ. ಎಸ್‌.ಡಿ.ಕೆ ಮುಕ್ತ ಪ್ರಕಾರದ ಫಾಂಟ್‌ಗಳನ್ನು ಬಳಸುವುದಿಲ್ಲವಾದ್ದರಿಂದ, ಪ್ರಸ್ತುತ ಪಡಿಸುವ ವೇಗದಲ್ಲಿ ರಾಜಿಯಾಗಬೇಕಿಲ್ಲ ಎಂದು ಇದು ಖಚಿತಪಡಿಸುತ್ತದೆ.

ಲೈಟ್‌ವೇಟ್ ಇಂಜಿನ್

ಮೆಮೊರಿ ಆಪ್ಟಿಮೈಸೇಶನ್ ಅನ್ನು ಹೆಚ್ಚಿಸಲು ಮತ್ತು ಸ್ಕ್ರೀನ್ ಮೇಲೆ ಪ್ರಸ್ತುತ ಪಡಿಸುವ ಸಮಯವನ್ನು ತ್ವರಿತಗೊಳಿಸಲು ರೆವೆರಿಯು ಪ್ರತಿ ಫಾಂಟ್ ಅನ್ನು ಶೂನ್ಯದಿಂದ ಅಭಿವೃದ್ಧಿಪಡಿಸಿದೆ - ಇದು ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡಲು ನಿರ್ಣಾಯಕವಾಗಿದೆ.

ನಿಖರವಾಗಿ ಪ್ರಸ್ತುತ ಪಡಿಸುವುದು

ಭಾರತೀಯ ಬರಹ‌ಗಳನ್ನು ನಮ್ಮ ಪಠ್ಯ ಪ್ರಸ್ತುತ ಪಡಿಸುವ ಎಂಜಿನ್‌ನೊಂದಿಗೆ ಕರಾರುವಕ್ಕಾಗಿ ಮತ್ತು ನಿಖರವಾಗಿ ಪ್ರಸ್ತುತಪಡಿಸಲಾಗುತ್ತದೆ, ಇದು ಸ್ಥಳೀಯ ಭಾಷೆಯ ಲಿಪಿಗಳ ಸಂಕೀರ್ಣತೆಗಳಿಗೆ ಅನುಗುಣವಾಗಿರುತ್ತದೆ. ಪ್ರಸ್ತುತಪಡಿಸುವ ವೇಗದಲ್ಲಿ ರಾಜಿ ಮಾಡಿಕೊಳ್ಳದೆ ಯುನಿಟಿ ಗೇಮ್ ಡೆವೆಲಪರ್‌ಗಳಿಗೆ ತಮ್ಮ ಗೇಮ್‌ಗಳನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲು ಅನುವು ಮಾಡಿಕೊಡುತ್ತದೆ.

16 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ

ಯುನಿಟಿ ಫಾಂಟ್ ಎಸ್‌.ಡಿ.ಕೆ 16 ಸ್ಥಳೀಯ ಭಾಷೆಗಳನ್ನು ಅವುಗಳ ಸಂಕೀರ್ಣ ಬರಹ‌ಗಳು ಹಾಗೂ ಸೂಕ್ಷ್ಮ ಸಂಗತಿಗಳನ್ನು ಪ್ರಸ್ತುತ ಪಡಿಸುವಲ್ಲಿ ರಾಜಿಯಾಗದೆ  ನಿಖರವಾಗಿ ಬೆಂಬಲಿಸುತ್ತದೆ

ಸಂಪರ್ಕದಲ್ಲಿರಿ ಮತ್ತು ನಿಜವಾದ ಸ್ಥಳೀಕರಣದ ಸಾಮರ್ಥ್ಯ ತೋರಿಸಿ

ಬಿ.ಐ.ಎಸ್‌ ಫಾಂಟ್ ಸೂಟ್‌ಗಳು

ದೇಶದಲ್ಲಿ ಮಾರಾಟವಾಗುವ ಮೊಬೈಲ್ ಡಿವೈಸ್‌ಗಳು ಎಲ್ಲಾ 22 ಅಧಿಕೃತ ಭಾರತೀಯ ಭಾಷೆಗಳನ್ನು ಬೆಂಬಲಿಸಬೇಕೆಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿ.ಐ.ಎಸ್) ಆದೇಶಿಸುತ್ತದೆ. ಬಿ.ಐ.ಎಸ್ ಫಾಂಟ್ ಡಿಸ್ಪ್ಲೇ ಸೂಟ್ ಉತ್ತಮ-ದರ್ಜೆಯ ಗುಣಮಟ್ಟ ಮತ್ತು ತಡೆರಹಿತ ಸಮನ್ವಯದ ಹೆಚ್ಚುವರಿ ಅನುಕೂಲದೊಂದಿಗೆ, ಫೀಚರ್ ಫೋನ್ ಒ.ಇ.ಎಮ್‌ಗಳು ಅದನ್ನು ಮಾಡಲು ಶಕ್ತಗೊಳಿಸುತ್ತದೆ.

ಕಡಿಮೆ-ಮೆಮೊರಿಯ ಹೆಜ್ಜೆಗುರುತು

ನಮ್ಮ ಬಿಟ್‌ಮ್ಯಾಪ್ ಫಾಂಟ್ ಪರಿಹಾರವು ಕನಿಷ್ಟ ರಾಮ್‌ನಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಹೊಂದುವಂತೆ ಮಾಡುತ್ತದೆ, ಇತರ ನಿರ್ಣಾಯಕ ಕಾರ್ಯಗಳು ಮತ್ತು ಅಪ್ಲಿಕೇಶನ್‌ಗಳಿಗೆ ಜಾಗವನ್ನು ಮುಕ್ತಗೊಳಿಸುತ್ತದೆ.

ನಿಖರವಾದ ಪ್ರಸ್ತುತಪಡಿಸುವಿಕೆ

ನಮ್ಮ ಪಠ್ಯ ಪ್ರಸ್ತುತಪಡಿಸುವ ಎಂಜಿನ್, ಕಾಲಕ್ರಮೇಣ ಪರಿಪೂರ್ಣಗೊಳಿಸಲಾಗಿದೆ, ಇದು ಭಾರತೀಯ ಲಿಪಿಗಳ ಸಂಕೀರ್ಣತೆಗಳಿಗೆ ಅನುಗುಣವಾಗಿರುತ್ತದೆ ಮತ್ತು ನಿಖರವಾದ ಸಂಯೋಜನೆಗಳನ್ನು ನೀಡುತ್ತದೆ.

ತಡೆರಹಿತ ಸಮನ್ವಯ

ಈ ಸೂಟ್ ಅನ್ನು ಜನಪ್ರಿಯ ಫೀಚರ್ ಫೋನ್ ಪ್ಲಾಟ್‌ಫಾರ್ಮ್‌ಗಳಾದ- ಸ್ಪ್ರೆಡ್‌ಟ್ರಮ್ ಮತ್ತು ಮೀಡಿಯಾಟೆಕ್ -ನಲ್ಲಿ ಮಿತಿಯಿಲ್ಲದೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ವಿಭಿನ್ನ ಸ್ಕ್ರೀನ್ ಅಳತೆಗಳಲ್ಲಿ 22 ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತದೆ.

ಸಂಪರ್ಕದಲ್ಲಿರಿ ಮತ್ತು ನಿಜವಾದ ಸ್ಥಳೀಕರಣದ ಸಾಮರ್ಥ್ಯ ತೋರಿಸಿ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!